My Home

photo unavailable
photo unavailable

Lohith C R

Living in Bengaluru, India

ನನ್ನ ನೀನು ನೋಡದೆ, ಹಾಗೆ ನಿಂತು ನಗುವೆಯ?

ನನ್ನ ನೀನು ನೋಡದೆ,
ಹಾಗೆ ನಿಂತು ನಗುವೆಯ?
ಮಾತಿನಲ್ಲಿ ಕೂಗದೆ,
ಕಣ್ಣಿನಲ್ಲೇ ಕರೆವೆಯ?
ಪ್ರೀತಿ ಮೂಡಿ ಕಳೆದಿದೆ ತುಂಬ ಸಮಯ,
ಕಂಡರೂ ಕಾಣದ ಹಾಗೆ, ಹುಡುಕು ನೀ ನನ್ನನ್ನು
ಸಿಕ್ಕರೆ ನೀನು ನನಗೆ, ಕೇಳೆನು ಏನನ್ನೂ

ನನ್ನ ನೀನು ಓಲೈಸುತ,
ನನ್ನ ಪ್ರೀತಿಯ ಬೇಡುತ,
ನನ್ನ ಬಾಚಿ ತಬ್ಬಿಕೊಂಡು, ಮರೆಸು ನನ್ನ ನೀ ಮುದ್ದಾಡುತ...
ನನಗೆ ಒಂದು ಮುತ್ತನು,
ಹಾಗೆ ನೀನು ಕೊಡುವೆಯ?
ನೀನು ಕಾಣೋ ಕನಸಲಿ,
ನನಗೆ ಜಾಗ ನೀಡೆಯ?
ಹೇಳದಂತೆ ಸೇರಿಕೋ ಮನದ ಮನೆಯ - ೧

ನಾ ನುಡಿಯೋ ಮಾತೆಲ್ಲವ,
ನೀ ಸುಮ್ಮನೆ ಕೇಳುತ,
ನಡೆಸಿಕೊಡು ಎಲ್ಲಾ ಮಾತನು, ನನ್ನ ಹಿಂದೆಯೇ ನೀ ಓಡಾಡುತ...
ನನ್ನ ಒಮ್ಮೆ ಕಾಡಿಸು,
ಇಲ್ಲದಂತೆ ಪರಿಚಯ
ನೀನು ಹೀಗೆ ಪ್ರೀತಿಸು,
ಮರೆಯೋ ಹಾಗೆ ನಾಳೆಯ
ನೀನೆ ಬೇಕು ಎಂದಿದೆ ನನ್ನ ಹೃದಯ - ೨

Tags: ಹೆಸರು ಪೂರ್ತಿ ಹೇಳದೆ, ಪರಮಾತ್ಮ, ಕನ್ನಡ ಹಾಡುಗಳು, ಹೊಸ ಸಾಹಿತ್ಯ.,

Followers (2)

Following (0)