My Home

photo unavailable
photo unavailable

Harsha N

Living in Bangalore, India

ನಾಲಿಗೆ ನುಲಿಗಳು (Kannada Tongue Twisters)

ಕನ್ನಡ ನಾಲಿಗೆ ನುಲಿಗಳನ್ನು ಹೇಳುವುದು, ಕೇಳುವುದು ಮೋಜಿನ ಚಟುವಟಿಕೆ. ಆಟದ ಮೂಲಕ ಕನ್ನಡ ಉಚ್ಚಾರಣೆಯನ್ನು ತಿದ್ದಲು ಇದು ಬಲು ಉಪಯುಕ್ತ. ಕೆಲವು ನಾಲಿಗೆ ನುಲಿಗಳನ್ನು ಇಲ್ಲಿ ಸ೦ಗ್ರಹಿಸುವ ಪ್ರಯತ್ನ ಮಾಡಿದ್ದೇನೆ. ಹಲವನ್ನು ಕಾರ್ಯಕ್ರಮಗಳಲ್ಲಿ ಕೇಳಿದ್ದು, ಹಲವನ್ನು ಇತರರಿ೦ದ ಕೇಳಿದ್ದು. ನಿಮಗೂ ಬೇರೆ ನಾಲಿಗೆ ನುಲಿಗಳು ತಿಳಿದಿದ್ದರೆ ತಿಳಿಸಿ.

೧. ಕಪ್ಪು ಕುಂಕುಮ ಕೆಂಪು ಕುಂಕುಮ

೨. ಕಾಗೆ ಪುಕ್ಕ ಗುಬ್ಬಿ ಪುಕ್ಕ

೩. ಕುರುಡು ಕುದುರೆಗೆ ಹುರಿದ ಹುರಿಗಡಲೆ

೪. ಬಂಕಾಪುರದ ಕೆಂಪು ಕುಂಕುಮ

೫. ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯುತ್ತಿತ್ತು

೬. ಜಂಬಗಿ ತೂಕಪ್ಪ ತುಂಬಿದ ತುಪ್ಪದ ತಂಬಿಗೆ ತಂದಾನ

೭. ಸಂಪಂಗಪ್ಪನ ಮಗ ಮರಿಸಂಪಂಗಪ್ಪ, ಮರಿಸಂಪಂಗಪ್ಪನ ಅಪ್ಪ ಸಂಪಂಗಪ್ಪ

೮. ಎರಡೆರಡೆಮ್ಮೆ ಮರದಡಿ ನಿಂತು ಕರಡದ ಹುಲ್ಲು ಕರಕರ ತಿಂತು

೯. ಕೆಸ್ತೂರ್ ರಸ್ತೇಲಿ ಕಸ್ತೂರ್ ರಂಗರಾಯರು ಪಿಸ್ತೂಲ್ ಏಟು ತಿಂದು ಸುಸ್ತಾಗಿ ಸತ್ತು ಬಿದ್ದರು

೧೦. ಎತ್ತೆರಡೆಮ್ಮೆರಡಾಡೆರಡು ಆಡಿನ ಮರಿ ಎರಡು

೧೧. ಅರಳಿ ಮರದಡಿ ತಳಿರೊಡೆದೆರೆಡೆಲೆ

೧೨. ಹುಡುಗಿ ಕೆಡಿಸಿದಳೆಳೆ ಹುಡುಗನ ತಲೆ

Tags: kannada tongue twisters, tongue twisters,

Followers (2)

Following (0)