My Home

photo unavailable
photo unavailable

Keerthan K

Living in Hyderabad, India

llಬ್ರಹ್ಮ ಬರೆದ ಅಂತ್ಯll

ಬ್ರಹ್ಮ ಬರೆದ ಹಾಳೆಯಲ್ಲಿ
ಅಂತ್ಯ ಏನಿದೆ
ತಿಳಿವ ತವಕದಲ್ಲಿ
ನನ್ನ ಪಯಣ ಸಾಗಿದೆ

ಹಿಡಿದ ಪ್ರೇಮ ಪುಷ್ಪ
ಇಂದು ಬಾಡಿ ಹೋಗಿದೆ
ಉಡುಗೊರೆಯೊಂದು ಕೊಡದೆ
ನನ್ನ ಬಳಿಯೇ ಉಳಿದಿದೆ

ಕಣ್ಣ ನೀರು ಜಾರಿ ಜಾರಿ
ಸಾಗರವೇ ಆಗಿದೆ
ಪ್ರೇಮ ನೋವ ತಿಂದು ತಿಂದು
ಬದುಕೋ ಹಸಿವು ಹೋಗಿದೆ

ನೀನು ಸಿಗದೆ ನನಗೆ
ಸಾಗೋ ದಾರಿ ಕಾಣದಾಗಿದೆ
ಬ್ರಹ್ಮ ಬರೆದ ಅಂತ್ಯ ಅರಸಿ
ನನ್ನ ಜೀವನ ಅಂತ್ಯವಾಗಿದೆ

- ಕೆಕೆ (ಕೀರ್ತನ್ ಕೆ)

Tags: ಬ್ರಹ್ಮ ಬರೆದ ಅಂತ್ಯ,

Followers (3)

Following (0)