My Home

photo unavailable
photo unavailable

Keerthan K

Living in Hyderabad, India

llಹೊಸತನll

ಹೊಸ ಬಾಳು ದಿನ ಬರಲು
ಹಳೇ ನೋವು ಮರೆ ಎನಲು
ನೂರಾರು ಕೊಂಡಿಯ ಸಂಕೋಲೆ ಕಳಚಿರಲು
ಚಿಂತ್ಯಾಕೆ ಮಾಡುತಿ ಹೊಸ ಪುಟದ ಆಕೃತಿ

ಅದೇ ಗಾಳಿ ಅದೇ ನೀರು
ಹೊಸದಾಗಿ ಹೊಮ್ಮಿರಲು
ಅದೇ ದೇಹ ಅದೇ ಮನಸ್ಸು
ಹೊಸ ಕನಸು ಚಿಮ್ಮಿರಲು
ನೋವ್ಯಾಕೆ ನುಂಗುತಿ ಹೊಸ ಕನಸ ಸಾರಥಿ

ಅದೇ ಪೆನ್ನು ಅದೇ ಹಾಳೆ
ಹೊಸ ಪದ್ಯ ಗೀಚಿರಲು
ಅದೇ ಕಣ್ಣು ಅದೇ ಹೃದಯ
ಹೊಸ ಕಲ್ಪನೆಗೆ ತೆರೆದಿರಲು
ಮತ್ತ್ಯಾಕೆ ಆಗುವೆ ನೀ ದೇವದಾಸನ ಮೂರುತಿ

- ಕೆಕೆ (ಕೀರ್ತನ್ ಕೆ)

Tags: ಹೊಸತನ,

Followers (3)

Following (0)