My Home

photo unavailable

Shamanth M

Living in Bangalore, India

ನಮ್ಮ ರಾಜಣ್ಣ

ನೀವೇ ನಮ್ಮ ಪ್ರೀತಿಯ ರಾಜಕುಮಾರ
ಕನ್ನಡ ತಾಯಿಯ ಪ್ರೇಮದ ಕುವರ
ಕನ್ನಡಕ್ಕಾಗಿ ಹೋರಾಡಿದ ವೀರ ಮಯೂರ
ಈ ನಾಡಲ್ಲಿ ನಿಮ್ಮ ಹೆಸರು ಅಜರಾಮರ
ನಿಮ್ಮಲ್ಲಿ ತುಂಬಿದೆ ಕಲೆಯ ಸಾಗರ
ನೀವು ಏರಿದ್ದೀರಿ ಸಾಧನೆಯ ಮಹಾ ಶಿಖರ
ಕರುಣಾಡಲ್ಲಿ ಎಂದಿಗೂ ನಿಮ್ಮದೇ ಅಬ್ಬರ
ನಿಮ್ಮ ಜನುಮದಿನ ಇಡೀ ನಾಡಿಗೆ ಸಡಗರ

ಹಾಡಲು ನಿಂತರೆ ಗಾನ ಗಂಧರ್ವ
ನಟನೆಯಲ್ಲಿ ನೀವು ಮಹಾ ಪರ್ವ
ಕನ್ನಡವೇ ಆಗಿತ್ತು ನಿಮಗೆ ಸರ್ವ
ಕನ್ನಡಿಗರಿಗೆ ನಿಮ್ಮ ಹೆಸರು ಹೇಳಲು ಗರ್ವ

ಕನ್ನಡ ಕಲ್ಪವೃಕ್ಷಕ್ಕೆ
ಕವಿಗಳ ಪದಗಳು ರಂಬೆ
ನಿಮ್ಮ ಧ್ವನಿ ಕೊಂಬೆ
ನಿಮ್ಮನ್ನು ಕಂಡು ಧನ್ಯಳಾದಳು ತಾಯಿ ಕನ್ನಡಾಂಬೆ

ನಿಮ್ಮ ಕಲೆಯನ್ನು ಕಂಡು ಕಲಾದೇವತೆ
ಮನಸಲ್ಲಿ ಪಡುತ್ತಿರುವಳು ಸಾರ್ಥಕತೆ
ನಿಮ್ಮ ಸಾಧನೆಗಳು ದೊಡ್ಡ ದಂತಕಥೆ
ಮೀರಿಸುವರಿಲ್ಲ ಯಾರೂ ನಿಮ್ಮ ಸೌಜನ್ಯತೆ
ಕಲಿಯಬೇಕು ಎಲ್ಲರೂ ನಿಮ್ಮ ಸರಳತೆ

ನೇತ್ರದಾನ ಮಾಡಿ, ಮಾಡಲು ಹೇಳಿದ ಧೀಮಂತ
ಸಮಜಸೇವೆ ಮಾಡುತ್ತ ಆಗಿರುವಿರಿ ಎಲ್ಲರ ಪಾಲಿಗೆ ಭಗವಂತ
ಸಿನಿಮಾಗಳ ಮೂಲಕ ಒಳ್ಳೆ ಸಂದೇಶಗಳ ಕೊಟ್ಟ ಸಿರಿವಂತ
ನೀವು ಎಂದೆಂದಿಗೂ ಕರುನಾಡಿಗೆ ಸ್ವಂತ

ನಮ್ಮ ಕೊನೆ ಉಸಿರು ಇರುವವರೆಗೂ ನಾವು ನಿಮ್ಮ ಅಭಿಮಾನಿ
ಕನ್ನಡ ಪರ ಹೋರಾಟಕ್ಕೆ ನಿಮ್ಮದೇ ಮೊದಲ ಧ್ವನಿ
ಕನ್ನಡ ಭಾಷೆ ಉಳಿದಿರಲು ನಿಮ್ಮ ಹಾಡುಗಳೇ ಸಂಜೀವಿನಿ
ಸತ್ತು ಹೋಗಿರುವ ಕನ್ನಡಾಭಿಮಾನವ ಬೆಳೆಸಲು ಮತ್ತೆ ಹುಟ್ಟಿ ಬನ್ನಿ

Tags: Dr.Rajkumar, Rajkumar, Rajanna, Kavana, Poem, Biography, Actor, Kannada, Karnataka, Industry, ರಾಜಕುಮಾರˌರಾಜಕುಮಾರ್ˌರಾಜಣ್ಣˌನಟˌಕವನˌಆತ್ಮ ಕಥೆ, ಕನ್ನಡˌಕನ್ರಾಟಕ ,

Followers (0)

Following (0)