My Home

photo unavailable
photo unavailable

Roopa Bangre

Living in Charlotte , United States of America

ಸಾಧನೆಯ ಸಾರ್ಥಕ ಬದುಕು ..

ಸಾಧನೆಯ ಸಾರ್ಥಕ ಬದುಕು .......
ಮರಳುಗಾಡಿನ ಒಣ ನೆಲದಲಿ ನೆಲೆಯೂರಿ, ಬಿರುಬಿಸಿಲನು ಸಹಿಸಿ ಬೇರೂರಿ ,ಮರಳ ಸಾರವನು ಹೀರಿ, ಸುಡು ಬೇಗೆಯ ದಗೆಯನು ದಹಿಸಿ ಬಾಯಲಿ ಸವಿ ನೀರೂರಿಸಿ ,ಸಾಧನೆಯ ಮೆರೆಸಿತು ಸಿಹಿ ಖರ್ಜೂರ .....
ಕಲ್ಮಶವಿರುವ ಕೆಸರನು ಲೆಕ್ಕಿಸದೆ ಕೊಸರಾಡಿ ಹಸನಾದ ಹಸಿರೆಲೆಯನು ಪಸರಿಸಿ, ಕಲಶದಂತೆ ಬೀಗುತ ಅರಳಿ ನಸುನಗುತ ನುಸುಳಿ ಸೆಳೆಯಿತು,ಸುವಾಸನೆಯ ಸುಂದರ ನಿರ್ಮಲ ಕೋಮಲ ಕಮಲ ....
ತೈಲದಲಿ ಮಿಂದು ತನ್ನೆಡೆಗೆ ತಿಮಿರವನು ತಿರುಗಿಸಿ ತನಗೆ ಮರುಗದೆ, ಮನ-ಮನೆಗೆ ಕೋರಿಕೆಯ ಭಕುತಿಯ ಮೆರುಗಿನ ಬೆಳಕಾಗಿ ತನ್ನಲ್ಲೇ ಕರಗಿತು ಹಣತೆ ....
——Rukku

Tags: ಸಾಧನೆಯ ಸಾರ್ಥಕ ಬದುಕು ..,

Followers (2)

Following (0)